CreamA Cream article
Article

ವೇಷ ಧರಿಸಿ ಸಂಗ್ರಹಿಸಿದ ಮೊತ್ತ `ಪರೋಪಕಾರಾಯ ಪುಣ್ಯಾಯ'  ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿತರಣೆ...

ಕನ್ನಡ ನಾಡು

ಉಡುಪಿ : ಟೀಂ ಯುವ ಟೈಗರ್ಸ್ ಮತ್ತು ಯುವ ಸೇವಾ ಸಂಘ ದುಗ್ಲಿಪದವು ಮಂಚಿ ಇವರ ಪರೋಪಕಾರಾಯ ಪುಣ್ಯಾಯ ಎಂಬ ಕಾರ್ಯಕ್ರಮದಡಿಯಲ್ಲಿ ಅಷ್ಟಮಿ ಹಾಗೂ ನವರಾತ್ರಿ ಸಂದರ್ಭದಲ್ಲಿ ವೇಷ ಧರಿಸಿ ಸಂಗ್ರಹಿಸಿದ ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಈ ವೇಳೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುಟ್ಟ ಬಾಲಕ ಹರ್ಪಿತ್ ಚಿಕಿತ್ಸೆಗಾಗಿ ಹಾಗೂ ಇತರ ಮೂವರಿಗೆ ಸಂಗ್ರಹಿಸಿದ 2.42ಲಕ್ಷ ರೂ. ಮೊತ್ತವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಚಂದ್ರಶೇಖರ್ ಶೇರಿಗಾರ್, ಕಸಾಪ ಉಡುಪಿ ಅಧ್ಯಕ್ಷ ರವಿರಾಜ್ ಎಚ್.ಪಿ., ಉದ್ಯಮಿ ಸುಭಾಷ್ ಎಂ.ಸಾಲ್ಯಾನ್, ಮಾಹೆಯ ಪ್ರಜಾಪತಿ, ಶಬರೀಶ್, ಸುಮತಿ ಶೇರಿಗಾರ್, ಶಾಂತರಾಮ ಶೆಟ್ಟಿ, ಡಾ.ಇಂದಿರಾ ಪೈ, ಸುಕನ್ಯಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Read More